ಪುಂಡಿ ಗಸಿ ಕರ್ನಾಟಕದ ಕರಾವಳಿ ಭಾಗದಲ್ಲಿ ಪುಂಡಿ ಗಸಿ ಅನ್ನೋದು ಉಪಹಾರದ ಸಮಯಕ್ಕೆ ಮಾಡುವ ತಿಂಡಿ.‌ ಹಿಂದೆಲ್ಲ ಗ್ರಾಮೀಣ ಭಾಗದ ರೈತರ ಮನೆಯಲ್ಲಿ ಬೆಳಗಿನ ತಿಂಡಿಗೆ ಬಹುತೇಕ ಪುಂಡಿಯೇ ಉಪಹಾರ. == ತಯಾರಿಸಲು ಬೇಕಾದ ಸಾಮಾಗ್ರಿಗಳು == ಪುಂಡಿಯನ್ನು ಕುಚಲಕ್ಕಿ, ಬೆಳ್ತಿಗೆ ಹಾಗೂ ಇತ್ತೀಚೆಗೆ ರೆಡಿಮೇಡ್‌ ಆಗಿ ಸಿಗುವ ಅಕ್ಕಿ ಹುಡಿ, ರವಾ ಹುಡಿಗಳಿಂದಲೂ ತಯಾರು ಮಾಡುತ್ತಾರೆ. ಕುಚಲಕ್ಕಿಯಿಂದ ತಯಾರಿಸುವವರು ಮೊದಲು ಅಕ್ಕಿಯನ್ನು ನೆನೆಯಲು ಹಾಕುತ್ತಾರೆ. ನಂತರ ಅದನ್ನ ಗ್ರೈಂಡರ್​ಗೆ ಹಾಕಿ ಗ್ರೈಂಡ್‌ ಮಾಡ್ತಾರೆ. ಹೀಗೆ ಮಾಡ್ಬೇಕಾದರೆ ಪದೇ ಪದೇ ನೀರು ಹಾಕುತ್ತಾ ಹೆಚ್ಚು ಅಂಟು ಅಂಟು ಆಗಿರುವಂತೆ ನೋಡಿಕೊಳ್ಳುತ್ತಾರೆ. == ಮಾಡುವ ವಿಧಾನ == ಹೆಚ್ಚು ಸಣ್ಣಗೆ ಗ್ರೈಂಡ್‌ ಮಾಡದೇ, ಒಂದು ಹಂತಕ್ಕೆ ಹುಡಿಯಾದ ಬಳಿಕ ಅದನ್ನು ಗ್ರೈಂಡರ್‌ ನಿಂದ ತೆಗೆದು ತಕ್ಕಮಟ್ಟಿಗೆ ಅಂಟು ಹೋಗುವ ತನಕ ಬಿಸಿ ಮಾಡ್ತಾರೆ. ಈ ಸಮಯದಲ್ಲೇ ರುಚಿ ಬೇಕಿದ್ದರೆ ತೆಂಗಿನಕಾಯಿ ತುರಿ ಹಾಕಿಕೊಳ್ಳುತ್ತಾರೆ. ನಂತರ ಬಿಸಿಯಾದ ಹಿಟ್ಟನ್ನು ಚೆಂಡಿನಂತೆ ಅಥವಾ ಉದ್ದವಾಗಿ ತಟ್ಟಿ ಅದನ್ನು ತೊಂದೂರು ಅನ್ನೋ ಪಾತ್ರೆಯಲ್ಲಿಟ್ಟು (ಅದರ ಅಡಿ ಭಾಗದಲ್ಲಿ ನೀರು, ಮೇಲಿನ ಕವಚದಲ್ಲಿ ಪುಂಡಿಯನ್ನು ಇಡುತ್ತಾರೆ) ಬಿಸಿ ಮಾಡುತ್ತಾರೆ. ಬೆಂದ ಈ ಪುಂಡಿಯನ್ನು ನಂತರ ಪಾತ್ರೆಯಿಂದ ತೆಗೆದು ತಮ್ಮಿಷ್ಟದ ಸಾರಿನೊಂದಿಗೆ ತಿನ್ನುತ್ತಾರೆ. ಇನ್ನು ಅಕ್ಕಿ ಹುಡಿಯಿಂದ ಪುಂಡಿ ಮಾಡುವವರು ನೇರವಾಗಿ ಕೊಂಚ ಬಿಸಿ ಮಾಡಿ ಪುಂಡಿ ತಟ್ಟುತ್ತಾರೆ. == ಗಸಿ ಮಾಡುವ ವಿಧಾನ == ಪುಂಡಿಗೆ ಗಸಿ ಮಾಡಲು ತರಕಾರಿ ಆಥವಾ ಕೋಳಿ ಸಾರಿಗೆ ತಯಾರಿಸಿದ ಸಾರನ್ನು ಪುಂಡಿಗೆ ಮಿಶ್ರಣ ಮಾಡುವುದರಿಮದ ಅದನ್ನು ಪುಂಡಿ ಗಸಿ ಎಂದು ಕರೆಯುತ್ತಾರೆ. == ಉಲ್ಲೇಖಗಳು ==